ಭುವನೇಶ್ವರಿ ಹೆಗಡೆ ಕನ್ನಡ ಸಾಹಿತ್ಯದ ಹಾಸ್ಯಲೋಕದಲ್ಲಿ ಪ್ರಮುಖವಾದ ಹೆಸರು.೦೬-೦೫-೧೯೫೬ರಲ್ಲಿ ಜನಿಸಿದ ಭುವನೇಶ್ವರಿ ಹೆಗಡೆ, ಉತ್ತರ ಕನ್ನಡ ಜಿಲ್ಲೆ ಕತ್ರಗಾಲ ಗ್ರಾಮದವರು. ಇವರ ತಂದೆ ಶ್ರೀ ಗಣಪತಿ ಹೆಗಡೆ ಕತ್ರಗಾಲ, ತಾಯಿ ಗೌರಮ್ಮ. ತಮ್ಮ ಪದವಿ ವಿದ್ಯಾಭ್ಯಾಸವನ್ನು ಶಿರ್ಸಿಯ ಎಮ್.ಇ.ಎಸ್ ಕಾಲೇಜಿನಲ್ಲಿ ಪೂರೈಸಿ ಕನರ್ನಾಟಕ ವಿಶ್ವವಿದ್ಯಾಲಯ ಧಾರವಾಡದಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ ಸ್ನಾತಕೋತ್ತರ ಪದವಿ ಪಡೆದವರು. ಪತಿ ಶ್ರೀ ಶಂಭುಹೆಗಡೆ ಹಾಗು ಮಗಳು ಆಭಾ. ಇವರ ೫೦೦ಕ್ಕೂ ಮಿಕ್ಕ ಹಾಸ್ಯ ಪ್ರಬಂಧ ರಚನೆ ಕನ್ನಡದ ಎಲ್ಲ ಪ್ರಮುಖ ಪತ್ರಿಕೆ,ನಿಯತಕಾಲಿಕೆಗಳಲ್ಲಿ ಪ್ರಕಟಿತವಾಗಿವೆ. ಪ್ರಸ್ತುತ ವಿಶ್ವವಿದ್ಯಾನಿಲಯ ಕಾಲೇಜು,ಮಂಗಳೂರು ಇಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕಿಯಾಗಿದ್ದಾರೆ. == ಕೃತಿಗಳು == == ರೇಡಿಯೋ ನಗೆ ನಾಟಕಗಳು == == ಪಠ್ಯ ಪುಸ್ತಕಗಳಲ್ಲಿನ ಪ್ರಬ೦ಧಗಳು == == ವಿಶೇಷ ಸಂಕಲನಗಳಲ್ಲಿನ ಲೇಖನಗಳು == == ಸಮ್ಮೇಳನ / ಸನ್ಮಾನ / ಸಮಾರ೦ಭ / ಪ್ರಬ೦ಧ ಮ೦ಡನೆ == ನವದೆಹಲಿಯ ಆಥರ್ಸ್ ಗಿಲ್ಡ್ ಆಫ್ ಇ೦ಡಿಯಾ ಮೀಟ್ ತಂಜಾವೂರಿನ ಚತುರ್ದ್ರಾವಿಡ ಭಾಷಾ ಸಮ್ಮೇಳನ ನೈ ಕನ್ನಡ ಸಂಘ ಗೋವಾ ಕರ್ನಾಟಕ ಸಂಘ ಬಿಜಾಪುರ, ಗುಲ್ಬರ್ಗಾ, ಮೈಸೂರು, ಹಾಸನ, ಮೂಡಿಗೆರೆ, ಕುದುರೆಮುಖ ಚಿಕ್ಕಮಗಳೂರು ಭದ್ರಾವತಿ, ಶಿವಮೊಗ್ಗ ಶೃಂಗೇರಿ, ಹೊಸನಗರ, ಮೂಡಬಿದ್ರಿ, ತುಮಕೂರು, ಬೆಂಗಳೂರು, ಹಾನಗಾಲ್ಲ್, ಜೋಗ, ಸಿರಸಿ,ಧಾರವಾಡ, ಪುತ್ತೂರು, ಸುಳ್ಯ, ಉಡುಪಿ, ಮಣಿಪಾಲ, ಕಾಂತಾವರ, ಕುಂದಾಪುರ, ಮಂಜೇಶ್ವರ, ಕಾಸರಗೋಡು, ಬಂಟ್ವಾಳಗಳ ವಿವಿಧ ಸಂಘ ಸ೦ಸ್ಥೆಗಳಲ್ಲಿ ಉಪನ್ಯಾಸ ಪ್ರಬಂಧ. == ಅಂಕಣ-ಬರಹಗಳು == == ವಿಶೇಷ ಸಾಧನೆ == ಅಂತರಾಷ್ಟ್ರೀಯ ಸಾಧನಾಶೀಲ ಮಹಿಳೆಯರ ಕುರಿತಾದ ಪುಸ್ತಕ ರೆಫ಼ರೆನ್ಸ್ ಏಷ್ಯಾದಲ್ಲಿ ಹೆಸರು ಸೇರ್ಪಡೆಯಾಗಿದೆ. == ಸಾಹಿತ್ಯ ಸಮ್ಮೇಳನಗಳಲ್ಲಿ ಅತಿಥಿ /ಸ೦ಪನ್ಮೂಲ ವ್ಯಕ್ತಿ == == ಮುನ್ನುಡಿ ಬರೆದ ಕೃತಿಗಳು == ಹೆಂಡತಿ ಮತ್ತು ವೆಹಿಕಲ್ - ತುರುವೇಕೆರೆ ಪ್ರಸಾದ್ ಕಲ್ಲಮ್ಮನ ಕ೦ಪೌ೦ಡ್ - ಶರಣಗೌಡ ಎರಡೆತ್ತಿನ ವಿಧುರನ ಒಸಗೆ - ಹಾಲಾಡಿ ಮಾರುತಿರಾವ್ ಜಾಜಿಗಿಡದ ಗುಬ್ಬಿಗಳು - ಜಯಾ ಯಾಜಿ ಆಸೆಗಿಷ್ಟು ಬಣ್ಣ ಹಚ್ಚಿ - ಡಾ||ಮೀರಾ ಎಸ್ ಹತ್ತೆಸಳು - ಕೊಡಗಿನ ಗೌರಮ್ಮ ಪ್ರಶಸ್ತಿ ವಿಜೇತ ಕಥಾ ಸಂಕಲನ ಅನುಕೂಲಕ್ಕೆ೦ದು ಅವತಾರ - ಮಲ್ಲಿಕಾರ್ಜುನ ಹುಲಗೆ ಬಾಳಿ ನಾನೂ ನನ್ನವಳೂ - ಪ್ರಕಾಶ್ ಪಯಣಿಗ ಕಾಣ್ಕೆ - ತೇಜಸ್ವಿನಿ ಹೆಗಡೆ ಅರೆಬೊಕ್ಕ ತಲೆಯವರು - ಎಚ್.ಎಸ್.ನವೀನ್ಕುಮಾರ್ ಚುಟುಕು ಸಂಕಲನ - ಗಣೇಶ್ ಪ್ರಸಾದ್ ಜಿ == ಪ್ರಶಸ್ತಿ, ಪುರಸ್ಕಾರಗಳು == ಟಿ. ಸುನಂದಮ್ಮ ಪ್ರಶಸ್ತಿ, ೨೦೨೩ == ಉಲ್ಲೇಖಗಳು ==